top of page
Search
Writer's pictureKCF United Kingdom

ಶಬೇ ಮಿಹ್ರಾಜ್ ಯುನೈಟೆಡ್ ಕಿಂಗ್ಡಮ್ನಲ್ಲಿ ಇಂದು ರಾತ್ರಿ ಆಚರಿಸಲಾಗುವುದು, ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ಶುಭಕೊರುತ್ತಿದೆ

ಲಂಡನ್ ಫೆಬ್ರುವರಿ 7: ರಜಬ್ 27 ಮುಸ್ಲಿಮರ ಸ್ಮರಣೀಯ ದಿನಗಳಲ್ಲಿ ಅತ್ಯಂತ ಪ್ರಮುಖ ದಿನವಾಗಿದೆ. ರಜಬ್ ತಿಂಗಳ 27 ರಾತ್ರಿಯ ಅಲ್ಪ ಸಮಯದಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ ಸಲ್ಲಲಾಹು ಅಲೈಹಿವ ಸಲ್ಲಮರು ಬುರಾಕ್ ಎಂಬ ವಾಹನದಲ್ಲಿ ಬೈತುಲ್ ಮುಖದ್ದಿಸ್ ತಲುಪಿ ಅಲ್ಲಿಂದ ಆಕಾಶ ಆರೋಹಣ ಮಾಡಿ ಜಗದೊಡೆಯನಾದ ಅಲ್ಲಾಹನನ್ನು ಯಾದರ್ಶಿಕ ಕಂಡು ಸಂಭಾಷಣೆ ನಡೆಸಿದ ಅತ್ಯಂತ ರೋಮಾಂಚನ ಸನ್ನಿವೇಶದ ಸ್ಮರಣೆಯಾಗಿದೆ ಶಬೇ ಮಿಹ್ರಾಜ್ ಅಥವಾ ಇಸ್ರಾ ಮಿಹ್ರಾಜ್ ಯಾತ್ರೆ. ಈ ಯಾತ್ರೆಯಲ್ಲಾಗಿದೆ ಮುಸ್ಲಿಮರ ಪ್ರಮುಖ ಆರಾಧನಾ ಕರ್ಮವಾದ ಪಂಚ ಸಮಯದ ಖಡ್ಡಾಯ ನಮಾಜ್ ಈ ಸಮುದಾಯಕ್ಕೆ ಕೊಡುಗೆಯಾಗಿ ದೊರಕಿರುವುದು.



ಜಗತ್ತಿನಾದ್ಯಂತ ಮುಸ್ಲಿಮ್ ಪ್ರಪಂಚವು ಈ ದಿನವನ್ನು ಅತ್ಯಂತ ಪ್ರಾಮುಖ್ಯತೆ ಕಲ್ಪಿಸಿ ಅಂದಿನ ರಾತ್ರಿ ವಿಶಿಷ್ಟ ಆರಾಧನೆಯಲ್ಲಿ ತೊಡಗುವುದು ರೂಢಿ ಹಾಗೂ ಇಸ್ಲಾಂ ಪಾರಂಪರ್ಯವಾಗಿ ಬಂದಿರುವ ಬಹಳ ಬೆಂಬಲಾರ್ಹ ಸಂಗತಿ.

ಈ ನಿಟ್ಟಿನಲ್ಲಿ ಯುಕೆಯಲ್ಲಿ ಇಂದು ರಾತ್ರಿ ಇಸ್ರಾ ಮಿಹ್ರಾಜ್ ರಾತ್ರಿಯಾಗಿ ಆಚರಿಸಿ ನಾಳೆಯ ದಿನ ರಜಬ್ 27 ರ ಉಪವಾಸವನ್ನು ಆಚರಿಸಲಾಗುತ್ತಿದೆ. ಹಲವಾರು ಮಸೀದಿ ಹಾಗೂ ಇಸ್ಲಾಮೀ ಕೇಂದ್ರಗಳು ಇಂದಿನ ದಿನದ ಮಹತ್ವವನ್ನು ಮತ್ತಷ್ಟು ಭದ್ರತೆ ಗೊಳಿಸಲು, ಪೈಗಂಬರರ ಈ ಕುತೂಹಲ ಯಾತ್ರೆಯನ್ನು ಸ್ಮರಿಸಲು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ಈ ದಿನಕ್ಕೆ ಪ್ರಧಾನ್ಯತೆಯನ್ನು ಕಲ್ಪಿಸುತ್ತಾ ತನ್ನ ಸದಸ್ಯರಲ್ಲಿ ಇಂದಿನ ರಾತ್ರಿ ಪ್ರಾರ್ಥನೆಯಲ್ಲಿ ತಲ್ಲೀನರಾಗಿ ನಾಳೆ ಉಪವಾಸವನ್ನು ಆಚರಿಸಿ ಈ ಪ್ರತ್ಯೇಕ ಸನ್ನಿವೇಶದ ಸ್ಮರಣೆಯಲ್ಲಿ ನಾವು ಕೂಡಾ ಭಾಗಿಯಾಗೋಣ ಎಂದು ಕರೆನೀಡುತ್ತಿದೆ.

92 views0 comments

Recent Posts

See All

Comments


bottom of page