✍ Moulana N K M Shafi Sa'adi
EX.Chairman , Karnataka Vakf Board.
ಕುಟುಂಬ, ಮನೆ, ಊರು ಎಲ್ಲವೂ ಬಿಟ್ಟು ನೋವು, ನಲಿವುಗಳ ಸಮ್ಮಿಶ್ರದೊಂದಿಗೆ ಉದ್ಯೋಗ,ಉದ್ಯಮದೊಂದಿಗೆ, ತನ್ನವರ ಸುಖ ಸಂತೋಷ ಕಾಣುವ ಪ್ರವಾಸಿಯ ನೋವು ಸಣ್ಣದೇ ನಲ್ಲ. ಆದರೆ ಆ ಸಂಕಷ್ಟದಲ್ಲೂ, ಸಂತೋಷಗಳನ್ನು ಧಾರೆ ಎರೆಯುವ ಒಂದು ಸಂಘಟನಾ ಶಕ್ತಿಯಾಗಿದೆ ಕೆ.ಸಿ.ಎಫ್. ವಿದೇಶಗಳಲ್ಲಿದ್ದ ಹಲವು ಸಣ್ಣ ಸಣ್ಣ ಕನ್ನಡ ಮಣ್ಣಿನ ಸುನ್ನೀ ಸಂಘಟನೆಗಳನ್ನು ಒಂದುಗೂಡಿಸಿ 10ವರ್ಷಗಳ ಮೊದಲು ಬೇಕಲ್ ಉಸ್ತಾದರ ಧನ್ಯ ನಾಯಕತ್ವದಲ್ಲಿ ಕೆ.ಸಿ.ಎಫ್ ಹೆಸರಿನೊಂದಿಗೆ ಚಾಲನೆ ಗೊಂಡು, ಇವತ್ತು UAE, ಸೌದಿ, ಕತ್ತರ್, ಬಹ್ರೈನ್, ಕುವೈತ್ , ಒಮಾನ್, ಯುಕೆ , ಸಹಿತ ಎಲ್ಲಾ ವಿದೇಶ ರಾಷ್ಟ್ರಗಳಲ್ಲಿ ಹೆಮ್ಮರವಾಗಿ ಬೆಳೆದು ನಿಂತಿರುವ ಕನ್ನಡಿಗರಿಂದ ಆರಂಭಗೊಂಡು, ಕನ್ನಡಿಗರೇ ಮುನ್ನಡೆಸುವ , ವ್ಯವಸ್ಥಿತ ಸಂಘಟನಾ ಶಕ್ತಿಯೊಂದಿರುವ ಏಕೈಕ ಸಂಘಟನೆಯಾಗಿದೆ ಕರ್ನಾಟಕ ಕಲ್ಚರಲ್ ಫೌಂಡೇಶನ್(KCF).
ತಮ್ಮ ಸಹವರ್ತಿಗಳಿಗೆ ಸಾಂತ್ವನ ನೀಡಿ, ಕನ್ನಡ ನಾಡಿನ ಶಿಕ್ಷಣ ಕ್ರಾಂತಿಯಲ್ಲಿ ಇಹ್ಸಾನ್ ಬಳಗವನ್ನು ಸಮರ್ಪಿಸಿ , ಅವರ ಶಕ್ತಿಯಾಗಿ, ಅನಿವಾಸಿ ಕನ್ನಡಿಗರ ಏಕೈಕ ಕನ್ನಡ ಮಾಸಿಕ ಗಲ್ಫ್ ಇಶಾರ ವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ, ಕೊರೋನಾ ಸಂದರ್ಭ ಮತ್ತು ವಿದೇಶಗಳಲ್ಲಿ ಮರಣ ಹೊಂದಿದ ಭಾರತೀಯರ ಅಂತಿಮ ವಿಧಿ ವಿಧಾನಗಳು, ಕಾನೂನು ತೊಡಕುಗಳ ಸಂದರ್ಭ , ಅದರ ಸಂಪೂರ್ಣ ಜವಾಬ್ದಾರಿ ವಹಿಸಿ ,ಈ ರೀತಿ ಕೆ.ಸಿ.ಎಫ್ ಮಾಡಿದ ಸೇವೆಗಳು ,ಸಾಂತ್ವನ ಕಾರ್ಯ ಚಟುವಟಿಕೆಗಳು ಬೆಟ್ಟದಷ್ಟು ಕಣ್ಣ ಮುಂದೆ ಹೆಮ್ಮರವಾಗಿ ಬೆಳೆದು ನಿಂತಿದೆ.
ದಶಮಾನೋತ್ಸವ ಹೊಸ್ತಿಲಲ್ಲಿ ಇರುವ ಕೆ.ಸಿ.ಎಫ್ , ತನ್ನ ಫೌಂಡೇಷನ್ ಡೇ ಆಚರಿಸುತ್ತಿರುವ ಈ ಸುದಿನ ದಲ್ಲಿ, ಅವರ ನಾಯಕತ್ವ, ಮತ್ತು ಕಾರ್ಯಕರ್ತರ ಸೇವೆಯನ್ನು ಸ್ಮರಿಸುತ್ತಾ , ಕೆ.ಸಿ.ಎಫ್ ಗಾಗಿ ನಾಯಕತ್ವ ಮತ್ತು ಕಾರ್ಯಾಚರಣೆ ಮಾಡಿ ನಮ್ಮಿಂದಗಲಿದ ಹಲವಾರು ಕಾರ್ಯಕರ್ತರ ಪರಲೋಕ ಮೋಕ್ಷಕ್ಕಾಗಿ ಪ್ರಾರ್ಥನೆ ಮಾಡುತ್ತಾ , ಎಲ್ಲಾ ಕನ್ನಡಿಗರೂ ಈ ಶುಭ ಸಂದರ್ಭ ಕೆ.ಸಿ.ಎಫ್ ಹತ್ತನೇ ವಾರ್ಷಿಕ ಪ್ರಚಾರದಲ್ಲಿ ತೊಡಗಿಸುವಂತೆ ಭಿನ್ನವಿಸುತ್ತಾ , ಕೆ.ಸಿ.ಎಫ್ ಫೌಂಡೇಷನ್ ದಿನದ ಶುಭಾಶಯಗಳು
Comments