ಜಿದ್ದಾ : ಕೆಸಿಎಫ್ ಹತ್ತು ವರ್ಷಗಳನ್ನು ಪೂರ್ತಿಗೊಳಿಸುವ ಸಂಭ್ರಮಿಸುವ ಸಂದರ್ಭ. ಈ ಮಹಾ ಸಮ್ಮೇಳನವು 21 ಏಪ್ರಿಲ್ 2024 ರಂದು ಮಂಗಳೂರಿನಲ್ಲಿ ಆಯೋಜಿಸಲು ತೀರ್ಮಾನಿಸಿದ್ದು ದಶಮಾನೋತ್ಸವ ಸಮ್ಮೇಳನದ ಪೋಸ್ಟರ್ ಮಹಾನರಾದ ಸುಲ್ತಾನುಲ್ ಉಲಮಾ AP ಉಸ್ತಾದರು ಘೋಷಣೆ ಮಾಡಿದರು. ದಶಮಾನೋತ್ಸವ ಸಮ್ಮೇಳನದ ಪೋಸ್ಟರ್ KCF IC ಅಧ್ಯಕ್ಷರಾದ ಮೌಲಾನಾ DP ಯೂಸಫ್ ಸಖಾಫಿ ಬೈತಾರ್ ಉಸ್ತಾದರು ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ನಜೀರ್ ಹಾಜಿ ಕಾಶಿಪಟ್ನ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.
ಅಸ್ಸಯ್ಯದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ತಂಗಳ್, IC ಪ್ರಕಾಶನ ಇಲಾಖೆ ಅಧ್ಯಕ್ಷರಾದ ಫಾರೂಕ್ ಕಾಟಿಪಳ್ಳ, ಸೌದಿ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ಸಾಲಿಹ್ ಬೆಳ್ಳಾರೆ, ಕೋಶಾಧಿಕಾರಿ ಮುಹಮ್ಮದ್ ಕಳ್ಳರಬೇ ಸಹಿತ ಇರುವ ಸೌದಿ ಕಾರ್ಯಕಾರಿಣಿ ಸಮಿತಿ ಸದಸ್ಯರು, ಜಿದ್ದಾ ಝೋನ್ ನಾಯಕರು ಹಾಜರಿದ್ದರು.
ಈ ದಶಮಾನೋತ್ಸವ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಅಲ್ಲಾಹನು ಕರುಣಿಸಲಿ.
Comentários