ಯುಕೆಯಲ್ಲಿನ ಕನ್ನಡಿಗ ಅನಿವಾಸಿಗಳಲ್ಲಿ ಧಾರ್ಮಿಕ ಪ್ರಜ್ಞೆ ಹಾಗೇ ಮುಂದುವರಿಸಲು ಹಾಗೂ ಯುವಕರನ್ನು ಇಸ್ಲಾಮೀ ಚೌಕಟ್ಟಿನ ಒಳಗಡೆ ಇರುವಂತೆ ಜಗ್ರತಿಯನ್ನು ಮೂಡಿಸಲು ಇಂಗ್ಲಂಡಿನ ನಾನಾ ಭಾಗದಲ್ಲಿ ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ಪ್ರತೀ ತಿಂಗಳು ಝಿಕ್ರ್ ಮಜ್ಲಿಸ್ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಈ ವ್ಯವಸ್ಥೆಯ ವಾರ್ಷಿಕ ಕಾರ್ಯಕ್ರಮವಾಗಿದೆ ಇಹ್ತಿಫಾಲ್. ಪ್ರತೀ ವರ್ಷವೂ ನಡೆಸಿಕೊಂಡು ಬರುವಂತೆ ಈ ವರ್ಷದ ಬಹುನಿರೀಕ್ಷಿತ ಇಹ್ತಿಫಾಲ್ ಕಾರ್ಯಕ್ರಮವು ಜನವರಿ 28, ಕೇರ್ ಹೌಸ್ ಕಮ್ಯುನಿಟಿ ಸೆಂಟರ್ ಶಾಡ್ವೆಲ್ ಲಂಡನ್ನಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಈ ಕಾರ್ಯಕ್ರಮವನ್ನು ಮಸ್ಜಿದ್ ಕ್ಯೂಬಾ ಲಂಡನ್ ಇದರ ಇಮಾಮ್ ಶೈಖ್ ಮುಹಮ್ಮದ್ ಇರ್ಶಾದ್ ನಜ್ಮಿ ಅಝ್ಹರಿ ಉದ್ಘಾಟಿಸಲಿದ್ದಾರೆ. ಹೊಂಸ್ಲೋ ಜಾಮಿಯಾ ಮಸೀದಿ, ಲಂಡನ್ ಇದರ ಮುಖ್ಯ ಇಮಾಮ್ ಶೈಖ್ ಅಮ್ಮಾರ್ ಸಿದ್ದೀಕಿ ಇವರು ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷನ ಮಾಡಲಿದ್ದಾರೆ. ಇಹ್ಸಾನ್ ಯುನೈಟೆಡ್ ಕಿಂಗ್ಡಮ್ ಇದರ ಅಧ್ಯ್ಷರಾದ ಅಝೀಝ್ ಉಸ್ತಾದ್ ದುಆ ನೆರವೇರಿಸಲಿರುವರು.
ಈ ಕಾರ್ಯಕ್ರಮದಲ್ಲಿ ಆತ್ಮೀಯ ಮಜ್ಲಿಸ್, ದೀನಿ ಪ್ರಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ದೆ, ಸಾಧಕರಿಗೆ ಸನ್ಮಾನ ಹಾಗೂ ನೆರೆದ ಎಲ್ಲರಿಗೂ ರಾತ್ರಿಯ ಊಟವನ್ನು ಕೂಡಾ ಏರ್ಪಡಿಸಲಾಗಿದೆ.
ದೀನೀ ಪ್ರೇಮಿಗಳಾದ ಪ್ರತಿಯೋರ್ವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆಯುವಂತೆ ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ತಮ್ಮೆಲ್ಲಾರನ್ನು ಹೃತ್ಪೂರ್ವಕ ಆಮಂತ್ರಿಸುತ್ತಿದೆ.
ಅಲ್ಲಹಾನು ತೌಫೀಕ್ ನೀಡಲಿ.
Comments