ಲಂಡನ್, ಜನವರಿ 28: ಯುಕೆಯಲ್ಲಿನ ಕನ್ನಡಿಗ ಅನಿವಾಸಿಗಳ ಅತ್ಯಂತ ಪ್ರಸಿದ್ದ ಸಂಘಟನೆ ಕೆಸಿಎಫ್ ಯುನೈಟೆಡ್ ಕಿಂಗ್ಡಮ್. ಸಾಮಾಜಿಕ, ಶೈಕ್ಷಣಿಕ, ದಾರ್ಮಿಕ ಹಾಗೂ ಸಾಂಸ್ಕೃತಿಕ ರಂಗಗಳಲ್ಲಿ ಅತೀ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸುತ್ತಾ ಬಂದಿದೆ.
ಧಾರ್ಮಿಕ ಪ್ರಜ್ಞೆ ಅತೀ ವೇಗವಾಗಿ ಕಳಚಿಕೊಳ್ಳುವ ಎಲ್ಲಾ ಸನ್ನಿವೇಶಗಳು ಒಳಗೊಂಡಿರುವ ಇಂದಿನ ಪರಿಸ್ಥಿಯಲ್ಲಿ ದಾರ್ಮಿಕ ಹಾಗೂ ಸಾಂಸ್ಕೃತಿಕ ಕಾಳಜಿಯನ್ನು ಮುಂದುವರಿಸಲು ಹಾಗೂ ಯುವಕರನ್ನು ಇಸ್ಲಾಮೀ ಚೌಕಟ್ಟಿನ ಒಳಗಡೆ ಇರುವಂತೆ ಜಾಗ್ರತಿಯನ್ನು ಮೂಡಿಸಲು ಇಂಗ್ಲಂಡಿನ ನಾನಾ ಭಾಗದಲ್ಲಿ ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ಪ್ರತೀ ತಿಂಗಳು ಝಿಕ್ರ್ ಮಜ್ಲಿಸ್ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಾ ಇದೆ.
ಈ ವ್ಯವಸ್ಥೆಯ ವಾರ್ಷಿಕ ಕಾರ್ಯಕ್ರಮವಾಗಿದೆ ಇಹ್ತಿಫಾಲ್. ಪ್ರತೀ ವರ್ಷವೂ ನಡೆಸಿಕೊಂಡು ಬರುವಂತೆ ಈ ವರ್ಷದ ಇಹ್ತಿಫಾಲ್-2024 ಕಾರ್ಯಕ್ರಮವು ಜನವರಿ 28, ಕೇರ್ ಹೌಸ್ ಕಮ್ಯುನಿಟಿ ಸೆಂಟರ್ ಶಾಡ್ವೆಲ್ ಲಂಡನ್ನಲ್ಲಿ ವಿಜೃಂಭಣೆಯಿಂದ ನಡೆಯಿತು. ಯುಕೆಯ ನಾನಾ ಭಾಗದಿಂದ ಕನ್ನಡಿಗ ಹಾಗೂ ನೆರೆ ಊರ ಅನಿವಾಸಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇದರ ಸದುಪಯೋಗವನ್ನು ಪಡೆದು ಕೊಂಡರು.
ದುಆ ಹಾಗೂ ಝಿಕ್ರ್ ಮಜ್ಲಿಸ್ ನೊಂದಿಗೆ ಸಮಯ ಮಸ್ಸoಜೆ ಸರಿ ಸುಮಾರು 4:00 ಗಂಟೆಗೆ ಕಾರ್ಯಕ್ರಮಕ್ಕೆ ಕೆಸಿಎಫ್ ಶಿಕ್ಷಣ ವಿಭಾಗದ ಕಾರ್ಯದರ್ಶಿ ನೌಶಾದ್ ಮುಈನಿ ಹಾಗೂ ಇಸ್ಮಾಯೀಲ್ ನೂರಾನೀ ಚಾಲನೆ ನೀಡಿದರು.
ಈ ಕಾರ್ಯಕ್ರಮವನ್ನು ಮಸ್ಜಿದ್ ಕ್ಯೂಬಾ ಲಂಡನ್ ಇದರ ಇಮಾಮ್ ಶೈಖ್ ಮುಹಮ್ಮದ್ ಇರ್ಶಾದ್ ನಜ್ಮಿ ಅಝ್ಹರಿ ಉದ್ಘಾಟಿಸಿ ಮಾತನಾಡುತ್ತಾ, ಅಲ್ಲಾಹನ ಹಾಗೂ ಪ್ರವಾದಿ ಮುಹಮ್ಮದ್ ಸಲ್ಲಲಾಹು ಅಲೈಹಿವ ಸಲ್ಲಮರ ಸ್ಮರಣೆಯ ಪ್ರಾಮುಖ್ಯತೆ ಬಗ್ಗೆ ವಿವರಿಸುತ್ತಾ ನೆರೆದವರಲ್ಲಿ ಹುಮ್ಮಸ್ಸು ತುಂಬಿದರು. ಬಳಿಕ ಹೊಂಸ್ಲೋ ಜಾಮಿಆ ಮಸೀದಿ, ಲಂಡನ್ ಇದರ ಮುಖ್ಯ ಇಮಾಮ್ ಶೈಖ್ ಅಮ್ಮಾರ್ ಸಿದ್ದೀಕಿ ಇವರು ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡುತ್ತಾ ಇಸ್ಲಾಮಿನಲ್ಲಿ ಯುವಕರ ಪಾತ್ರಗಳ ಬಗ್ಗೆ ವಿವರಿಸುತ್ತಾ ಯುವಕರಲ್ಲಿ ಆತ್ಮಸ್ಥೈರ್ಯ ತುಂಬಿದರು.
ಜನವರಿ 2024 ಶೈಕ್ಷಣಿಕ ವರ್ಷದಲ್ಲಿ ಯುಕೆಗೆ ಬಂದಿರುವ ನಾಡಿನ ವಿಧ್ಯಾರ್ಥಿಗಳಿಗೆ ಕೆಸಿಎಫ್ ವಿಧ್ಯಾರ್ಥಿ ಕಲ್ಯಾಣ ವಿಭಾಗದ ಅಧ್ಯಕ್ಷ ಹಫೀಜ್ ಅಹ್ಮದ್ ಹಾಗೂ ಕಾರ್ಯದರ್ಶಿ ಸಹಲ್ ಉಳ್ಳಾಲ ರವರು ಇಲ್ಲಿನ ಶಿಕ್ಷಣ, ಉದ್ಯೋಗ ಹಾಗೂ ಜೀವನದ ಬಗ್ಗೆ ಅತ್ಯಗತ್ಯ ಮಾರ್ಗದರ್ಶಿ ತರಗತಿಯನ್ನು ನೀಡಿದರು.
ಯುಕೆಯಲ್ಲಿ ಉನ್ನತ ವಿಧ್ಯಾಭ್ಯಾಸ ಪೂರ್ತಿ ಗೊಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಲಾಯಿತು. ಈ ಸಂಧರ್ಭದಲ್ಲಿ ಕೆಸಿಎಫ್ ನ ನಾಯಕರಾದ ಆಸಿಫ್ ಬಜ್ಪೆ, ರಫೀಕ್ ಹಳೆಯಂಗಡಿ, ತೌಸೀಫ್, ಮೊಯ್ದೀನ್ ಮರ್ಝೂಕ್ ಹೋನೇಶ್ಟ್, ಮುಹಮ್ಮದ್ ಇರ್ಫಾನ್ ಹಾಗೂ ಸದಖತುಲ್ಲಾ ಮಿಲ್ಟನ್ ಕೀನ್ಸ್ ಜೊತೆಗಿದ್ದರು. ವಿಶೇಷವಾಗಿ ಇತ್ತೀಚೆಗೆ ಲೋಕಾರ್ಪಣೆಗೊಂಡ ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ನ ವೆಬ್ಸೈಟ್ ನ ತಯಾರಿಕೆಯಲ್ಲಿ ನಾಯಕತ್ವ ವಹಿಸಿದ ಕೆಸಿಎಫ್ ನ ಐಟಿ ವಿಭಾಗದ ಕಾರ್ಯದರ್ಶಿ ರಿಜ್ವಾನ್ ಖಾದರ್ ಇವರ ಕಾರ್ಯಚಟುವಟಿಕೆಯನ್ನು ಗುರುತಿಸಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಮಧ್ಯದಲ್ಲಿ ಲಘು ಉಪಹಾರ ಹಾಗೂ ಕೊನೆಯಲ್ಲಿ ಕೆಸಿಎಫ್ ಕಾರ್ಯಕರ್ತರು ಸ್ವತಃ ತಯಾರಿಸಿದ ಭೋಜನವೂ ನೀಡಿದ್ದು ಅಂದಿನ ಕಾರ್ಯಕ್ರಮಕ್ಕೆ ಮೆರುಗು ತಂದಿತು.
ಕೆಸಿಎಫ್ ಯುಕೆ ಅಧ್ಯಕ್ಷರಾದ ಅಬ್ದುಲ್ಲಾ ಬೈಕಂಪಾಡಿ ಅವರು ಕಾರ್ಯಕ್ರಮದ ಅಧ್ಯ್ಷತೆಯನ್ನು ವಹಿಸಿಕೊಂಡು ಅಧ್ಯಕ್ಷೀಯ ಭಾಷಣವನ್ನು ಮಾಡಿದರೆ, ಪ್ರಧಾನ ಕಾರ್ಯದರ್ಶಿ ಫೈರೋಜ್ ಕಬಕ ರವರು ಅತಿಥಿಗಳನ್ನು ಸ್ವಾಗತಸಿದರು, ಸಂಘಟನಾ ಕಾರ್ಯದರ್ಶಿ ಹನೀಫ್ ಪೇರಿಮಾರ್ ಕಾರಯಕ್ರಮವನ್ನು ನಿರೂಪಿಸಿದರು, ವೆಲ್ಫೇರ್ ಕಾರ್ಯದರ್ಶಿ ಅಬ್ಬಾಸ್ ಮಕ್ಯಾರ್ ರವರು ನೆರೆದ ಎಲ್ಲರಿಗೂ ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಇಹ್ಸಾನ್ ಯುನೈಟೆಡ್ ಕಿಂಗ್ಡಮ್ ಇದರ ಅಧ್ಯ್ಷರಾದ ಅಝೀಝ್ ಉಸ್ತಾದ್ ಬರ್ದಾ ಆಲಾಪನೆಗೆ ನೇತೃತ್ವ ನೀಡಿದರು ಹಾಗೂ ಯೂಸುಫ್ ಅದನಿ ಉಸ್ತಾದರು ದುಆ ನಡೆಸಿ ಕಾರ್ಯಕ್ರಮ ಕೊನೆಗೊಳಿಸಲಾಯಿತು.
Comments