ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ಗ್ರ್ಯಾಂಡ್ ಇಫ್ತಾರ್ ಮೀಟ್ 2025, ನೌಫಲ್ ಕಳಸ ಸಕಾಫಿ ಮುಖ್ಯ ಅತಿಥಿ
- KCF United Kingdom
- Mar 9
- 1 min read
ಪವಿತ್ರ ರಂಝಾನ್ ತಿಂಗಳ ಆಗಮನ ಜಗತ್ತಿನಾದ್ಯಂತ ಮುಸ್ಲಿಮರಲ್ಲಿ ಎಲ್ಲಿಲ್ಲದ ಸಂತಸ. ದೇವನ ಆರಾಧನೆಯಲ್ಲಿ ಇನ್ನಷ್ಟೂ ಹೆಚ್ಚು ಉತ್ಸಾಹ ತರುವಂತಹ ತಿಂಗಳು.ಯುಕೆಯಲ್ಲಿನ ಕನ್ನಡಿಗ ಅನಿವಾಸಿಗಳಲ್ಲಿ ಧಾರ್ಮಿಕ ಪ್ರಜ್ಞೆ ಹಾಗೇ ಮುಂದುವರಿಸಲು ಹಾಗೂ ಯುವಕರನ್ನು ಇಸ್ಲಾಮೀ ಚೌಕಟ್ಟಿನ ಒಳಗಡೆ ಇರುವಂತೆ ಜಗ್ರತಿಯನ್ನು ಮೂಡಿಸಲು ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ಹಲವಾರು ಪದ್ಧತಿಗಳನ್ನು ಹಮ್ಮಿಕೊಳ್ಳುತ್ತವೆ. ಅದರಲ್ಲೂ ಮುಖ್ಯವಾಗಿ ಗ್ರ್ಯಾಂಡ್ ಇಫ್ತಾರ್ ಮೀಟ್. ಪ್ರತೀ ವರ್ಷವೂ ನಡೆಸಿಕೊಂಡು ಬರುವಂತೆ ಈ ವರ್ಷದ ಬಹುನಿರೀಕ್ಷಿತ ಗ್ರ್ಯಾಂಡ್ ಇಫ್ತಾರ್ ಮೀಟ್ ಕಾರ್ಯಕ್ರಮವು ಮಾರ್ಚ್ 14, ಬರ್ನೆಟ್ ಮಲ್ಟಿ ಕಲ್ಚರಲ್ ಕಮ್ಯುನಿಟಿ ಸೆಂಟರ್, ಹೆಂಡನ್, ಲಂಡನ್ನಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ , ಆತ್ಮೀಯ ಮಜ್ಲಿಸ್, ಇಫ್ತಾರ್, ತರಾವೀಹ್ ನಮಾಜ್, ರಾತ್ರಿಯ ಔತನ ಎಲ್ಲವನ್ನೂ ಒಳಗೊಂಡಿದ್ದು ಎಲ್ಲಕ್ಕಿಂತಲೂ ಮುಖ್ಯವಾಗಿ ಬಹುಭಾಷಾ ವಾಗ್ಮಿ, ದೇಶ ವಿದೇಶದಲ್ಲಿ ಹೆಸರಾಂತ ಭಾಷಣಗಾರ ಉಸ್ತಾದ್ ನೌಫಲ್ ಸಕಾಫಿ ಕಳಸ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.

ದೀನೀ ಪ್ರೇಮಿಗಳಾದ ಪ್ರತಿಯೋರ್ವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆಯುವಂತೆ ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ತಮ್ಮೆಲ್ಲಾರನ್ನು ಹೃತ್ಪೂರ್ವಕ ಆಮಂತ್ರಿಸುತ್ತಿದೆ.
ಅಲ್ಲಹಾನು ತೌಫೀಕ್ ನೀಡಲಿ
Comentarios