ಲಂಡನ್ : ಇಂಗ್ಲೆಂಡ್ ಪ್ರವಾಸದಲ್ಲಿರುವ ಕರ್ನಾಟಕ ರಾಜ್ಯ ವಿಧಾನಸಭಾ ಸ್ಪೀಕರ್ ಮಾನ್ಯ ಯು ಟಿ ಖಾದರ್ ರನ್ನು ಲಂಡನ್ ನ ಪ್ರತಿಷ್ಠಿತ ಹಿಲ್ಟನ್ ಹೋಟೆಲ್ ನಲ್ಲಿ ಕೆಸಿಎಫ್ ಯುನೈಟೆಡ್ ಕಿಂಗ್ಡಮ್, ಲಂಡನ್ ನ ಸಾರಥಿಗಳು ಭೇಟಿಯಾಗಿ ಅವರಿಗೆ ಅದ್ದೂರಿಯ ಸ್ವಾಗತವನ್ನು ಕೋರಿದರು. ಬಳಿಕ ಸುಧೀರ್ಘವಾಗಿ ಕೆಸಿಎಫ್ ನ ಕಾರ್ಯಚಟುವಟಿಕೆಗಳನ್ನು ಚರ್ಚಿಸುವುದರ ಜೊತೆಗೆ ಅವರನ್ನು ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾದ ಹೆಮ್ಮೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೆಸಿಎಫ್ ಯುನೈಟೆಡ್ ಕಿಂಗ್ಡಮ್ ಅಧ್ಯಕ್ಷ ರಹೀಂ ಅಬ್ದುಲ್ಲಾ ಬೈಕಂಪಾಡಿ, ಕೋಶಾಧಿಕಾರಿ ಸದಕ ಮಿಲ್ಟೊಂಕೀನ್ಸ್, ಸಂಘಟನಾ ಕಾರ್ಯದರ್ಶಿ ಹನೀಫ್ ಎಂಜಿನಿಯರ್ ಪೇರಿಮಾರ್, ಇಹ್ಸಾನ್ ವಿಭಾಗದ ಮುಖ್ಯಸ್ಥ ರಫೀಕ್ ಲೂಟನ್, ಸಾಂತ್ವಾನ ಕಾರ್ಯದರ್ಶಿ ಆಸಿಫ್ ಬಜಿಪೆ, ನಾಯಕರಾದ ಅಬ್ಬಾಸ್ ಮಕ್ಯಾರ್, ಇರ್ಫಾನ್ ಲಂಡನ್, ಮೀಡಿಯಾ ಕಾರ್ಯದರ್ಶಿಗಳಾದ ಶಹೀದ್ ಮುಈನಿ, ರಿಜ್ವಾನ್ ಬೆಡ್ಫಾರ್ಡ್, ಕಾರ್ಯಕರ್ತರಾದ ಮರ್ಝೂಖ್ ವಿಟ್ಲ ಹೋನೇಶ್ಟ್, ಜುನೈದ್ ತಲೆಮುಗೆರ್, ಅರ್ಫಾನ್, ಝಈದ್, ಮುಂತರ್, ಮಜೀದ್, ತೌಸೀಫ್, ಮುಸ್ತಫ, ನವಾಫ್ ಜೊತೆಗಿದ್ದರು
Comments